ನಮ್ಮ ಪುಟ್ಟ ನಾಯಿ
ಪ್ರಕಟಿತ: ತುಷಾರ, ನವೆಂಬರ್, 2012
ಸುಮ್ಮನಿರದು ಅದರ ಬಾಯಿ,
ದಪ್ಪ ಕುಚ್ಚುಅದರ ಬಾಲ,
ಆಡಿಸುವುದು ಸದಾಕಾಲ.
ಬಂಗಾರದಂತ ಮೈಯಬಣ್ಣ,
ಮುದ್ದಿಸಬೇಕು ಅದರ ಗೋಲಿ ಕಣ್ಣ
ಚೆಂಡು ಕಂಡರದಕೆ ಪ್ರೀತಿ,
ಕುಣಿಯುವುದು ನಾನಾ ರೀತಿ.
ಏನು ಮಾಡಲದುವೆ ಚೆನ್ನ ,
ಕೊಡೆವು ನಾವು ಕೊಟ್ಟರೂ ಚಿನ್ನ .
ಸುಮಾ ಕಳಸಾಪುರ |
Comments