ಊರ ಮಧ್ಯದ ಗುಡಿಯ ಮುಂದಿನ ಸಂತೆಯಲ್ಲಿ ನಿಂತು
ಹುಡುಕುತ್ತಿರುವೆ ಮೌನವನು ಎಲ್ಲಿರುವುದೆಂದು,
ಕೈಗೆಟುಕದ ದರದಲ್ಲಿ ಬಣ್ಣ ಬಣ್ಣದ ಆಟಿಕೆ,
ಲಜ್ಜೆಗೆಟ್ಟರು ಪರವಾಗಿಲ್ಲ ಚೌಕಾಸಿಗೆ ಇಲ್ಲ ನಾಚಿಕೆ,
ಸಂತೆ ಎಂದರೆ, ಅಲ್ಲ ಕಂತೆ ಕಂತೆಯ ಲೆಕ್ಕಚಾರ,
ನಡೆ ನಡೆದು ವ್ಯವಹರಿಸಿದಂತೆ ತಿಳಿಹುದು ಸಂತೆಯೊಳಗಿನ ಜೀವನ ಸಾಕ್ಷಾತ್ಕಾರ...!
Comments