ಚಿತ್ರ ನಿರ್ದೇಶಕ ಪ್ರೇಮ್ ಎಂದಿಗೂ ಹೊಸತನ್ನು ಟ್ರೈ ಮಾಡುವ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಕೆಲಸ ಮಾಡುವುದರಲ್ಲಿ ನಿಸ್ಸೀಮರು. ಟ್ರೈಲರ್ ನಲ್ಲೇ ಆಕರ್ಷಿಸುತ್ತಾರೆ, ಹಾಡುಗಳಿಂದಲೇ ಸಿನೆಮಾದ ಬಂಡವಾಳ ತೆಗೆಯುತ್ತಾರೆ. ಹೀಗೆ ಇವರ ಪ್ರಯತ್ನಗಳು ಯಶಸ್ಸಿನತ್ತ ನಡೆಯುತ್ತಿರುತ್ತದೆ. ಪ್ರೇಕ್ಷಕನ ಮನಸ್ಸಿನ ಸೂಕ್ಷ್ಮಗಳನ್ನ, ವಿಶೇಷವಾಗಿ ಎಮೋಷನಲ್ ಮ್ಯಾಟರ್‍ಗಳನ್ನು ತೆರೆಯ ಮೇಲೆ ತರೋದ್ರಲ್ಲಿ ಮತ್ತು ಮನ ಮುಟ್ಟಿಸುವಂತೆ ತೊರಿಸೋದ್ರಲ್ಲಿ ಈತ ಏಕಮೇವಾದ್ವಿತೀಯ. ಆದರೆ, ಎಲ್ಲೋ ಒಂದೆರಡುಬಾರಿ ಎಡವಿದ್ದೂ ಉಂಟು , ಟ್ರೈಲರ್‍ನಲ್ಲಿ , ಸಾಂಗ್‍ಗಳಲ್ಲಿ ಕೊಟ್ಟ ಬ್ಯುಲ್ಡಪ್‍ಗಳಿಗೆ ತಕ್ಕಂತೆ ಸಿನೆಮಾ ಇರೋದಿಲ್ಲ..
ಈಗ ಮಾತಾಡೋಕೆ ಹೊರಟಿರೋದು "ದಿ ವಿಲ್ಲನ್" ಚಿತ್ರದ ಟೀಸರ್ ಬಗ್ಗೆ. ಇಬ್ಬರು ಚಕ್ರವರ್ತಿಗಳು ( ಕರುನಾಡ ಚಕ್ರವರ್ತಿ- ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ - ಕಿಚ್ಚ ಸುದೀಪ್) ಇವರುಗಳ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಾ ಇರೋ ಈ ಸಿನೆಮಾದ ಟೀ ಸರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. 2.08 ನಿಮಿಷದ್ದು ಶಿವಣ್ಣನ ಮೇಲಿನ ಟೀಸರ್ ಮತ್ತು 2.04 ನಿಮಿಷದ್ದು ಸುದೀಪ್‍ರ ಮೇಲಿನ ಟೀಸರ್...
ಶಿವಣ್ಣನ ಮಾಸ್ ಕ್ಯಾರೆಕ್ಟರ್ ಬಿಂಬಿಸೋ ಸಲುವಾಗಿ ತುಸು ಹೆಚ್ಚೇ ಅನಿಸುವಂತಿದೆ ಇವರಿರುವ ಟೀಸರ್, ಕೋ- ಆರ್ಟಿಸ್ಟ್ ಗಳು ಹೇಳುವ ಮಾತಿಂದ ಮತ್ತು ಕಡೇದಾಗಿ ಶಿವಣ್ಣ ಹೇಳುವ ಪಂಚ್ ಡೈಲಾಗ್‍ನಿಂದ ಅವರ ಕ್ಯಾರೆಕ್ಟರ್ ಬಗ್ಗೆ ಸಲೀಸಾಗಿ ಮಾಸ್ ಪ್ರೇಕ್ಷಕರಿಗೆ ತಿಳಿಯುತ್ತೆ. ತೀರ ಕುತೂಹಲ ಅನಿಸದ, ವಿಷ್ಯುಯಲ್ ಎಫೆಕ್ಟ್ ಗಳಿಂದ ಕೂಡಿದ ಈ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಸುಮಾರು 70000 ವೀಕ್ಷಣೆಯನ್ನ ಹೊಂದಿದ್ದು ಶ್ಲಾಘನೀಯ.
ಇನ್ನು ಸುದೀಪ್ ಇರುವ ಟೀಸರ್‍ಗೆ ಬರೋಣ, 'ಗೊದ್ದ'(ಇರುವೆ ಜಾತಿಯ ಕೀಟ)ವನ್ನು ಆಡಿಸುತ್ತ ಇಡೀ ಟೀಸರ್ ತುಂಬ ಒಬ್ಬರೇ ಕಾಣುವ ಸುದೀಪ್, " ಆನೆ ಬಂತೊಂದ್ ಆನೆ...." ಎಂಬ ಸಾಲನ್ನು ಹೇಳ್ತಿರ್ತಾರೆ. ಹೌದು ಎಲ್ಲೋ ಕೇಳಿದ ಹಾಗೆ ಅನ್ಸೋದು ನಿಜ. ಮಕ್ಕಳಿಗೆ ಆಡಿಸುವಾಗ ಹಿಂದೆ ಹಿರಿಯರು ಈ ಸಾಲುಗಳನ್ನು ಹೇಳ್ತಾ ಇದ್ದದ್ದೂ ನಿಜ. ಆದರೆ ಅಷ್ಟಕ್ಕೇ ಮುಗಿಯೊಲ್ಲ, ಇತ್ತೀಚೆಗೆಷ್ಟೇ ಬಿಡುಗಡೆಯಾದ "ರ್ಯಾಂಬೋ-2" ಚಲನಚಿತ್ರದ ದೃಶ್ಯವೊಂದರಲ್ಲಿ ಖಳನಟ ರವಿಶಂಕರ್ ಈ ಸಾಲನ್ನ ಹೇಳ್ತಾರೆ ಮತು ಅದೇ ಧಾಟಿಯಲ್ಲಿ "ದಿ ವಿಲ್ಲನ್" ಟೀಸರ್ ನಲ್ಲಿ ಸುದೀಪ್ ಹೇಳ್ತಾರೆ...!!!!
ಇದು ಗಮನಿಸಬೇಕಾದ ಅಂಶವೋ ಅಲ್ಲವೋ ಯೋಚಿಸಬೇಕು.. ಇದು ಬಿಡುಗಡೆಯಾದ 24 ಗಂಟೆಗಳಲ್ಲಿ ಸುಮಾರು 120000ಕ್ಕೂ ಹೆಚ್ಚು ವಿಕ್ಷಣೆಗಳನ್ನ ಹೊಂದಿದೆ.
ವಿಷಯ ಏನೇ ಇರಲಿ, ಟೀಸರ್‍ನಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ ಪ್ರೇಮ್. ಟೀಸರ್ ನೋಡಿ ಬೆರಗಾಗಿ, ಕುತೂಹಲದಿಂದ ಕಾಯುತ್ತಿರುವ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಗೆ ಚಿತ್ರವೂ ಅಷ್ಟೇ ಮನೋರಂಜನೆ ನೀಡಲಿ. ಇಬ್ಬರು ಖ್ಯಾತ ನಟರ ಕಾಂಬಿನೇಷನ್ ನಲ್ಲಿ ಬರ್ತಾ ಇರೋ "ದಿ ವಿಲ್ಲನ್" ಚಿತ್ರ ಜನರ ಪಾಲಿಗೆ 'ವಿಲ್ಲನ್' ಆಗದೆ 'ಹೀರೋ' ಆಗಿ ಸಂತೋಷ ನೀಡಲಿ ಎಂದು ಹಾರೈಸುವ....
- ಏನೋಲಾ.
Sreeharsha Gobhatt Shivamogga
MyShivamogga
Like us and follow us
|
Comments